
FloatingWaffle
8moby
ಗುರೂ, ಬಿ ಖಾತೆ ಕಥೆ ಏನು ಅಂತೇನಾದ್ರೂ ಗೊತ್ತಾಯ್ತ?
ಕೃಷ್ಣ ಬೈರೇಗೌಡ ಅಂತೂ, B ಖಾತೆ ಬದಲು, ಏ ಖಾತಾ ಕೊಡುವ ಪ್ರಯತ್ನ ನಡೀತಿದೆ, ಬಿಬಿಎಂಪಿ ಅವರು ಟ್ರೈ ಮಾಡ್ತಿದ್ದಾರೆ ಅಂತಾರೆ.
ಆದ್ರೆ B ಖಾತಾ ಕೊಡೋದು ನಿಲ್ಲಿಸಿ, ಈಗ ಓಸಿ ಇಲ್ಲದೇ ಎಲೆಕ್ಟ್ರಿಸಿಟಿ ಕೊಡೋದನ್ನೂ ನಿಲ್ಲಿಸಿದ್ದಾರೆ. ಯಾವ B ಖಾತೆಗೂ ಒಸಿ ಸಿಗಲ್ಲ. ಏನು ಮಾಡೋದು?
ನಮ್ಮಪ್ಪ ಅಮ್ಮ ಆ ಕಾಲದಲ್ಲಿ ಅವರಿಗೆ ಆಗೋ ತರ ಒಂದು ಸೈಟ್ ಮಾಡಿದ್ರು ಮಾರಾಯ. ಅದನ್ನ ಖಾತಾ ಮಾಡಿಸದೀರ, ಇವಾಗ ಖಾತನೂ ಸಿಗ್ತಿಲ್ಲ. ಮಾರೋದಕ್ಕೂ ಆಗಲ್ಲ. ಮನೆ ಕಟ್ಟಕ್ಕೂ ಆಗ್ತಿಲ್ಲ. ನಾಯಿ ಗವರ್ನಮೆಂಟ್ ಆಗ್ಬಿಟ್ಟಿದೆ. ಯಾರೂ ಬಡವರು ಒಂದು ಸೈಟ್ ತಗೊಂಡ್ರೆ ಅದಕ್ಕೂ ಹೊಟ್ಟೆಮೇಲೆ ಹೊಡೀತಾರೆ.
ನಿಮಗೇನಾದರೂ ಸುದ್ಧಿ ಗೊತ್ತಿದ್ದರೆ ತಿಳಿಸಿ. ಈ ಆಪಲ್ಲಿ ಬರೀ ನಾರ್ಥಿಗಳ ಜಾಸ್ತಿ. ಎನ್ ಎಕ್ಸ್ಪೆಕ್ಟ್ ಮಾಡದೂ ಇಲ್ಲ. ನೋಡೋಣ ನಮ್ಮವರಿದ್ದರಾ ಅಂತ😄
8mo ago

You're early. There are no comments yet.
Be the first to comment.
Discover more
Curated from across